ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಚಿಕ್ಕೋಡಿ:ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅಕ್ಕೊಳ ಗ್ರಾಮದ 50 ಕ್ಕೂ ಹೆಚ್ಚು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ರಾವಸಾಬ ಪುಣೇಕರ,ವೈಶಾಲಿ ಪುಣೇಕರ, ಭರತ ತಾವಡೆ,ಸುಶೀಲಾ ತಾವಡೆ, ಅಮರಜಿತ ಚೌಗಲೆ, ಪ್ರದೀಪ ಚೌಗಲೆ,ಭಾರತಿ ಚೌಗಲೆ,ರಾಮಾ ಬನ್ನೆ, ವಸಂತ ಬನ್ನೆ, ಸಿದ್ದಪ್ಪ ಬನ್ನೆ, ಸುಹಾಸ ಬನ್ನೆ,ಶ್ರೀಪತಿ ಪಾಟೀಲ, ಪ್ರಕಾಶ ಬಾರಾಮಲ, ಲಕ್ಷ್ಮಣ ಜಾಧವ, ಸೌರಭ ತರಾಳ,ಹಾಗೂ ಅವರ ತಂಡದ 50 ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಆತ್ಮೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ, ಹಾಲಶುಗರ ಅಧ್ಯಕ್ಷರಾದ ಮಲಗೊಂಡ ಪಾಟೀಲ,ರಾವಸಾಹೇವ ಫರಾಳೆ,ಸುಹಾಸ ಗುಗೆ, ಜಯಕುಮಾರ ಖೋತ,ವಿಕಾಸ ಸಂಕಪಾಳ,ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *